
27th April 2025
ಬೀದರ. ಏ. 26:- ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಪರಮ ಉನ್ನತ ಸ್ಥಾನಕ್ಕಾಗಿ ಸ್ಥಾಪಿಸಲಾಗಿದ್ದು, ಇದರ ಅಡಿಯಲ್ಲಿ ಹತ್ತಾರು ಸಂಸ್ಥೆಗಳು ದೇಶದ ಏಕತೆಗಾಗಿ, ಅಭ್ಯುದಯಕ್ಕಾಗಿ ಶ್ರಮಿಸುತ್ತೇವೆ. ಅಂತಹ ಸಂಸ್ಥೆಗಳಲ್ಲಿ ಲಘು ಉದ್ಯೋಗ ಭಾರತಿ ಕೂಡಾ ಒಂದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲಬುರ್ಗಿ ವಿಭಾಗೀಯ ಪ್ರಚಾರಕ ಹಣಮಂತರಾವ್ ಪಾಟೀಲ್ ತಿಳಿಸಿದರು.
ನಗರದ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ನಡೆದ ಲಘು ಉದ್ಯೋಗ ಭಾರತಿ 31ನೇ ಸ್ಥಾಪನಾ ದಿವಸ ಹಾಗೂ ಲಘು ಉದ್ಯೋಗ ಭಾರತಿ ಬೀದರ್ ಘಟಕದ ಚಾಲನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರು 20-25 ಕೋಟಿಯ ವ್ಯವಹಾರ ನಡಸ್ತಿದ್ದಾರೆ ಆದರೆ ಆ ವ್ಯವಹಾರ ಪಾಟ್ನರ್ಷಿಪ್ ನಲ್ಲಿ ಇರುತ್ತದೆ.
ಪಾಟ್ನರ್ಷಿಪ್ ವ್ಯವಹಾರಕ್ಕಿಂತ ಸ್ವಂತ ಕಂಪನಿಗಳ ನಿರ್ಮಾಣಕ್ಕೆ ಯುವಕರು ಹೆಚ್ಚು ಒತ್ತು ಕೊಡಬೇಕು.
ನೀವು ಸ್ವಂತ ಕಂಪನಿ ನಿರ್ಮಾಣಕ್ಕೆ ಮುಂದಾದಾಗ ಸರ್ಕಾರ ನಿಮಗೆ ಸಹಾಯ ನೀಡುತ್ತವೆ. ಕೇವಲ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಅಷ್ಟೇ ಅಲ್ಲದೆ ಸಹಕಾರಿ ಬ್ಯಾಂಕ್ ಗಳಲ್ಲಿಯೂ ಸಹ ಸಹಾಯ ಮಾಡಲಿವೆ.
ಆದರೆ ಎಷ್ಟೋ ಜನಕ್ಕೆ ಸ್ವಂತ ಉದ್ಯೋಗ ಸ್ಥಾಪಿಸಲು ಸರ್ಕಾರ ನೀಡುವ ಸಹಾಯಹಸ್ತದ ಬಗ್ಗೆ ಮಾಹಿತಿ ಕೊರತೆ ಇದೆ ಆ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಿಳಿಸುವ ಕೆಲಸವನ್ನ ಲಘು ಉದ್ಯೋಗ ಭಾರತಿ ಕಳೆದ ಮೂರು ದಶಕಗಳಿಂದ ಮಾಡ್ತಾ ಬಂದಿದೆ ಎಂದರು.
ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಬಿ.ಜಿ.ಶೇಟಗಾರ ಮಾತನಾಡಿ, ಇಂಡಸ್ಟ್ರಿ ಮಾಡೋದು ಬ್ಯೂಸನ್ಸ್ ಮಾಡಿದಂಗಲ್ಲ, ಎರಡಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ಇಂಡಸ್ಟ್ರಿ ಮಾಡುವಾಗ ಸ್ವಲ್ಪ ಎಡುವಿದರು ಇರುವ ಆಸ್ತಿಯನ್ನು ಮಾರಿ ಬೀದಿಗೆ ಬರಬೇಕಾಗುತ್ತದೆ.
ಇಂದು ಇಂಡಸ್ಟ್ರಿ ಮಾಡಲು ಸಾಕಷ್ಟು ಸಹಕಾರ ಸಿಗುತ್ತಿದೆ, ಆದರೆ ಸಹಕಾರ ಇದ್ದರೆ ಮಾತ್ರ ಸಾಲದು ಅದರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಬೇಕು.
ದುಡ್ಡಿದೆ ಎಂದು ಇಂಡಸ್ಟ್ರಿ ಮಾಡಿ ಕೈ ಸುಟ್ಟುಕೊಂಡ ಉದಾಹರಣೆಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ.
ಇಂತಹ ಸಮಯದಲ್ಲಿ ಲಘು ಉದ್ಯೋಗ ಭಾರತಿ ಸಂಸ್ಥೆ ಸಹಾಯದೊಂದಿಗೆ ಸಹಕಾರವನ್ನು ಸಹ ನೀಡಿ ಸದೃಢ ಭಾರತ ನಿರ್ಮಾಣ ಮಾಡಲು ಪಣ ತೊಟ್ಟಿದೆ ಲಘು ಉದ್ಯೋಗ ಭಾರತಿ ಕಾರ್ಯವನ್ನು ಶ್ಲಾಘಿಸಿದರು.
ನಂತರ ನಗರದ ಖ್ಯಾತ ಉದ್ಯಮಿಗಳಾದ ರಮೇಶ ಹೂಗಾರ ಗಾದಗಿ, ಸಚಿನ್ ಕೊಳ್ಳುರ್, ಅಶೋಕ್ ರಿಜೆಂತಲ್, ಪುನೀತ್ ಸಿಂಗ್ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.
ಈ ವೇಳೆ ರಾಮಕೃಷ್ಣ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು, ಡಿ.ಐ.ಸಿ ಜಂಟಿ ನಿರ್ದೇಶಕಿ ಸುರೇಖಾ ಮನೊಳಿ, ಹಿಂದೂ ಎಕನಾಮಿಕ್ ಫೋರಮ್ ನ ಬೀದರ್ ಘಟಕದ ಅಧ್ಯಕ್ಷ ಸೋಮಶೇಖರ್ ಪಾಟೀಲ್ ಗಾದಗಿ, ಲಘು ಉದ್ಯೋಗ ಭಾರತಿ ಸ್ಥಾಪಕ ಸದಸ್ಯರಾದ ಡಿ.ವಿ.ಸಿಂಧೂಲ್, ಶಿವರಾಜ್ ಹಲಶೆಟ್ಟಿ, ಲಘು ಉದ್ಯೋಗ ಭಾರತಿ ಬೀದರ್ ಘಟಕದ ಅಧ್ಯಕ್ಷರಾದ ಸಚ್ಚಿದಾನಂದ ಚಿದ್ರೆ, ಕಾರ್ಯದರ್ಶಿ ಚೇತನ್ ಡಬ್ಕೆ, ಉಪಾಧ್ಯಕ್ಷ ಬಸವರಾಜ ಬಂಡೆ, ಜಂಟಿ ಕಾರ್ಯದರ್ಶಿ ಮಂಜುನಾಥ ಹೂಗಾರ, ಕಾರ್ಯಕಾರಿ ಸಮಿತಿ ಸದಸ್ಯ ಪ್ರಥಮೇಶ್ ಹಲಶೆಟ್ಟಿ, ಅಮಯ್ ಸಿಂಧೋಲ್, ರಾಘವೇಂದ್ರ ಪಾಟೀಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವಿಶ್ವ ಮಲೇರಿಯಾ ದಿನ ಜಾಗೃತಿ ಜಾಥಾ ಕಾರ್ಯಕ್ರಮ ಯಾವುದೇ ಜ್ವರವಿರಲಿ ರಕ್ತ ಪರಿಕ್ಷೆ ಮಾಡಿಸಿಕೊಳ್ಳಿ, ಸಂಪೂರ್ಣ ಚಿಕಿತ್ಸೆ ಪಡೆಯಿರಿ ಮಲೇರಿಯಾದಿಂದ ಮುಕ್ತರಾಗಿ